ಸೇತುಬಂಧ

*ಆರನೇ ತರಗತಿ ಗಣಿತ ವಿಷಯದ ಪೂರ್ವ ಮತ್ತು ಸಾಫಲ್ಯ ಪ್ರಶ್ನೆಗಳು*

ಸಾಮರ್ಥ್ಯ 1

1. ನಾಗವೇಣಯು ತನ್ನ ಮೂರು ಮನೆಗಳಿಂದ ಮಾಸಿಕ ರೂ 9750. ರೂ 12500. ರೂ 15300 ಬಾಡಿಗೆ ಪಡೆಯುತ್ತಾಳೆ. ನಾಗವೇಣಿಯು ಪ್ರತಿ ತಿಂಗಳು ಪಡೆಯುವ ಒಟ್ಟು ಬಾಡಿಗೆ ಎಷ್ಟು?

2. 27,232 ರಲ್ಲಿ ಎಷ್ಟನ್ನು ಕಳೆದರೆ 1760 ಆಗುತ್ತದೆ?

3. 2345 ಇದನ್ನು ಸ್ಥಾನಬೆಲೆಗೆ ಅನುಗುಣವಾಗಿ ವಿಸ್ತರಿಸಿ ಬರೆಯಿರಿ.

4. ಒಂದು ಪೆನ್ನಿನ ಬೆಲೆ 5 ರೂಪಾಯಿಗಳಾದರೆ, 5 ಪೆನ್ನು ಗಳ ಬೆಲೆ ಎಷ್ಟು?

ಸಾಮರ್ಥ್ಯ 2

1.1/4 ಇದರ ಅಂಶ ಮತ್ತು ಛೇದವನ್ನು ಗುರುತಿಸಿರಿ.

2.13/16 ಮತ್ತು 13/10 ಇವುಗಳ ನಡುವೆ ಸರಿಯಾದ ಚಿನ್ನೆ ಹಾಕು.

3.1/2 ಇದರ 5 ಸಮಾನ ಭಿನ್ನರಾಶಿ ಗಳನ್ನು ಬರೆ.

4. ನಾಲ್ಕನೇ ಐದು ಇದನ್ನು ಭಿನ್ನರಾಶಿಯಲ್ಲಿ ಬರೆ.

ಸಾಮರ್ಥ್ಯ 3

1. ಕೋನಗಳ ವಿಧಗಳನ್ನು ಹೆಸರಿಸಿ.

2. A b c d e f g h i j k l m n o p q r p q r s t u v w x y z ಇವುಗಳಲ್ಲಿ ಕೋನ ಉಂಟುಮಾಡುವ ಅಕ್ಷರಗಳನ್ನು ಆರಿಸಿ ಬರೆಯಿರಿ.

3. 7 ಗಂಟೆ 45 ನಿಮಿಷ ಇಲ್ಲಿ  ಉಂಟಾಗುವ ಕೋನವನ್ನು ಹೆಸರಿಸಿ .

4. 90 ಡಿಗ್ರಿ ಅಳತೆ ಕೋನವನ್ನು ರಚಿಸಿ.

ಸಾಮರ್ಥ್ಯ 4.

1. ಆಯತದ ಸುತ್ತಳತೆ ಕಂಡುಹಿಡಿಯುವ ಸೂತ್ರ ಬರೆಯಿರಿ.

2. ಚೌಕದಲ್ಲಿ ಎಷ್ಟು ಸಮಾನ ಬಾಹು ಗಳಿರುತ್ತವೆ?

3. ನಿನ್ನ ಗಣಿತ ಅಭ್ಯಾಸ ಪುಸ್ತಕದ ಸುತ್ತಳತೆಯನ್ನು ಕಂಡುಹಿಡಿ.

4. ಎರಡು ಆಯಾಮಗಳನ್ನು ಹೊಂದಿರುವ ಆಕೃತಿಗಳನ್ನು ಏನೆಂದು ಕರೆಯುತ್ತಾರೆ?

ಸಾಮರ್ಥ್ಯ 5

1. ಉದ್ದ ಅಳೆಯುವ ಅನೌಪಚಾರಿಕ ಮಾನಗಳು ಯಾವುವು?

2. 8 ಕಿಲೋ ಮೀಟರ್ ಅನ್ನು ಮೀಟರ್ ಅಳತೆಗೆ ಪರಿವರ್ತಿಸಿ ಬರೆ.

3. 16 ಸೆಂಟಿಮೀಟರ್ ಉದ್ದ ದ ದಾರವನ್ನು 4 ಸೆಂಟಿ ಮೀಟರ್ ಉದ್ದದ ಎಷ್ಟು ತುಂಡುಗಳಾಗಿ ಮಾಡಬಹುದು?

4. 2537 ಮೀಟರನ್ನ ಕಿಲೋಮೀಟರ್ ಗಳಾಗಿ ಪರಿವರ್ತಿಸಿ.

Comments

Popular posts from this blog

ದಿನಾಂಕ 23 -7- 202೦

ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ