Posts

Showing posts from July, 2020

ಸ್ನೇಹಿತರು, ವೃತ್ತಿ ಬಾಂಧವರು, ಸಹದ್ಯೋಗಿಗಳೊಂದಿಗೆ ಮಾತನಾಡಿ ಜ್ಞಾನ ಹೆಚ್ಚಿಸಿಕೊಂಡ ಬಗ್ಗೆ ಟಿಪ್ಪಣಿ

        ಇಂದು ಕೊರೋನಾ ಸಾರ್ವತ್ರಿಕವಾಗಿ ಹಬ್ಬಿರುವ ಹಿನ್ನೆಲೆ ಶಿಕ್ಷಕರಾದ ನಮ್ಮೆಲ್ಲರಿಗೂ ಮನೆಗೆಲಸವನ್ನು ನೀಡುವ ಮೂಲಕ ಯೋಜನೆಗಳನ್ನು ರೂಪಿಸಲು ತಿಳಿಸಲಾಗಿದೆ. ಈ ಯೋಜನೆಗಳ ಪ್ರಯುಕ್ತ ಅನೇಕ ಸ್ನೇಹಿತರ, ವೃತ್ತಿ ಬಾಂಧವರ ಜೊತೆ ಮಾತನಾಡಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲಾಯಿತು. ಬ್ಲಾಗನ್ನು ಆರಂಭ ಮಾಡುವ ಮೂಲಕ ಯೋಜನೆಗಳನ್ನು ಅಲ್ಲಿ ಯಾವ ರೀತಿಯಾಗಿ ಸೇರ್ಪಡೆ ಮಾಡಬೇಕು ಎನ್ನುವುದರ ಬಗ್ಗೆ ನನ್ನ ಸಹೋದ್ಯೋಗಿ ಯಾದ  ಕುಮಾರಿ ವೆಂಕಟಮ್ಮ ಅವರೊಂದಿಗೆ ಚರ್ಚಿಸುವ ಮೂಲಕ ಅನೇಕ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮೊಬೈಲ್ ಬಳಕೆ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲಾಯಿತು. ಅಲ್ಲದೆ ಮನೆಯಲ್ಲಿರುವ ವಸ್ತುಗಳ ಮೂಲಕ ನಲಿಕಲಿ ಗಣಿತ ವಿಷಯಕ್ಕೆ ಸಂಬಂಧಪಟ್ಟಂತೆ ಕಲಿಕೋಪಕರಣಗಳು ತಯಾರಿಸುವ ಕುರಿತು ಚರ್ಚಿಸಲಾಯಿತು.                   ‌‌‌‌ ಸ್ನೇಹಿತರಾದ ಹಾಗೂ ನಮ್ಮ ಯಜಮಾನರಾದ ಶ್ರೀ ಪ್ರಕಾಶ್ ರವರೊಂದಿಗೆ ಚರ್ಚಿಸುವ ಮೂಲಕ ಬ್ಲಾಗ್ ತೆಗೆಯುವ ಕುರಿತು ಹಾಗೂ ಬ್ಲಾಗ್ನಲ್ಲಿ ಮಾಹಿತಿಯನ್ನು ಯಾವ ರೀತಿಯಾಗಿ ಅಳವಡಿಸಬೇಕು ಎಂಬುದರ ಕುರಿತು ಅನೇಕ ಹೆಚ್ಚಿನ ಮಾಹಿತಿಯನ್ನು ಪಡೆಯಲಾಯಿತು                     ಯೂಟ್ಯೂಬ್ನಲ್ಲಿ ಅನೇಕ ಸಹದ್ಯೋಗ...

*ಗಣಿತದ ರಸಪ್ರಶ್ನೆಗಳು*

1.5438 ಈ ಸಂಖ್ಯೆಯಲ್ಲಿ ನಾಲ್ಕರ ಸ್ಥಾನಬೆಲೆ ಏನು? 2. ಒಂದು ಅಂಕಿಯ ಅತಿ ಚಿಕ್ಕ ಸಂಖ್ಯೆ ಯಾವುದು? 3. ಒಂದು ಅಂ ಕಿಯ ಅತಿ ದೊಡ್ಡ ಸಂಖ್ಯೆ ಯಾವುದು? 4. 3 ಅಂಕಿಯ ಅತಿ ಚಿಕ್ಕ ಸಂಖ್ಯೆ ಯಾವುದು? 5. ಮೂರಂಕಿ ಅತಿ ದೊಡ್ಡ ಸಂಖ್ಯೆ ಯಾವುದು? 6. ಮೂವತ್ತು ಸಾವಿರದ ನಾಲ್ಕು ಇದನ್ನು ಸಂಖ್ಯೆಯಲ್ಲಿ ಹೇಳಿ. 7.89,999 ಇದನ್ನು ಪದಗಳಲ್ಲಿ ಹೇಳು. 8. 8470 ಇದರಲ್ಲಿ ಎಂಟರ ಮುಖಬೆಲೆ ಹೇಳು. 9.56,178 ಇದರಲ್ಲಿ ಆರರ ಸ್ಥಾನಬೆಲೆ ಹೇಳು. 10.1456 ಈ ಸಂಖ್ಯೆಯಲ್ಲಿ ನೂರರ ಸ್ಥಾನಕ್ಕೆ ಅಂದಾಜಿಸಿ ಹೇಳು. 11.8962 ಈ ಸಂಖ್ಯೆಯಲ್ಲಿ ಸಾವಿರದ ಸ್ಥಾನಕ್ಕೆ ಅಂದಾಜಿಸಿ ಹೇಳು. 12.8415 ಇದನ್ನು ವಿಸ್ತರಿಸಿ ಹೇಳು. 13.9124-3768 ಇದರ ವ್ಯತ್ಯಾಸ ತಿಳಿಸಿ. 14.40 ರ ಅಪವರ್ತನೆ ಗಳನ್ನು ಹೇಳು. 15.36/4 ಇದರಲ್ಲಿ ಭಾಜ್ಯ ಸಂಖ್ಯೆ ಯಾವುದು? 16.9 ರ ಮಗ್ಗಿ ಹೇಳು?. 17.3/4 ಈ ಭಿನ್ನರಾಶಿಯನ್ನು ಪದಗಳಲ್ಲಿ ಹೇಳು. 18. ಭಿನ್ನರಾಶಿ ಎಂದರೇನು?. 19. ಕೋನಗಳ ವಿಧಗಳು ಯಾವುವು? 20. ಭಿನ್ನ ರಾಶಿಯಲ್ಲಿರುವ ವಿಧಗಳು ಯಾವುವು? 21. ಗಂಟೆಯ ಮುಳ್ಳು, ನಿಮಿಷದ ಮುಳ್ಳು, ಸೆಕೆಂಡ್ ಮುಳ್ಳು ಹನ್ನೆರಡರ ಮೇಲಿದ್ದರೆ, ಯಾವ ಸಮಯವನ್ನು ಸೂಚಿಸುತ್ತದೆ? 22. ವೃತ್ತ ಎಂದರೇನು 23. ವೃತ್ತದಜ್ಯಾ ಎಂದರೇನು? 24. ವೃತ್ತದ ವ್ಯಾಸ ಎಂದರೇನು? 25. ಉದ್ದವನ್ನು ನಿಖರವಾಗಿ ಅಳೆಯಲು ಇರುವ ಆದರ್ಶ ಮಾನ ಯಾವುದು? 26. ಒಂದು ಮೀಟರ್ ನಲ್ಲಿ ಎಷ್ಟು ಸೆಂಟಿಮೀಟರ್ ಗಳು ಇರುತ್ತವೆ? 27....

ನಲಿ ಕಲಿ ಗಣಿತದ ಕಲಿಕೋಪಕರಣಗಳು

Image

ಯೂಟ್ಯೂಬ್ನಲ್ಲಿ ನಲಿಕಲಿ ತರಗತಿ ನಿರ್ವಹಣೆಯ ವೀಕ್ಷಣೆ

       ಇಂದು ದಿನಾಂಕ 31-7-2020 ರಂದು ಯೂಟ್ಯೂಬ್ನಲ್ಲಿ ಆಶಾ ಹೆಗಡೆ( ಎಂಆರ್ಪಿ ನಲಿಕಲಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಳಕುಂದ ತಾಲೂಕ ಜಿಲ್ಲೆಗುಲ್ಬರ್ಗ ಇವರ ನಲಿಕಲಿ ತರಗತಿ ನಿರ್ವಹಣೆ ಬಗ್ಗೆ ಮಾದರಿ ಪಾಠವನ್ನು ನೀಡಿದರು.ಬಣ್ಣದ ತಗಡಿನ ತುತ್ತೂರಿ ಎಂಬ ಅಭಿನಯ ಗೀತೆ ಯೊಂದಿಗೆ ತರಗತಿಯ ಪ್ರಾರಂಭವನ್ನು ಮಾಡಿ ಅಚ್ಚುಕಟ್ಟಾಗಿ ಮಕ್ಕಳನ್ನು ತಮ್ಮತ್ತ ಸೆಳೆಯುತ್ತಸ್ಪಷ್ಟವಾದ ಸಂದೇಶಗಳೊಂದಿಗೆ ಮಕ್ಕಳಿಗೆ ಸೂಚನೆಗಳನ್ನು ನೀಡುತ್ತಾ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದರು. ಒಟ್ಟಿನಲ್ಲಿ ಮಕ್ಕಳು ನಲಿಕಲಿ ತರಗತಿಗೆ ತಕ್ಕಂತೆ ನಲಿಯುತ್ತಾ ಕಲಿಕೆಯಲ್ಲಿ ತೊಡಗಿದರು. ಒಟ್ಟಿನಲ್ಲಿ ನಲಿ ಕಲಿ ತರಗತಿಯನ್ನು ಅಚ್ಚುಕಟ್ಟಾಗಿ  ನಿರ್ವಹಣೆ ಮಾಡಿದರು.

ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂಭಾಷಣೆ

       ಇಂದು ದಿನಾಂಕ 31-7-2020 ರಂದು ಮೂರನೇ ತರಗತಿಯ ಮಕ್ಕಳಾದ ಚಂದು ಕಾಶಪ್ಪ ದೂರವಾಣಿ ಸಂಖ್ಯೆ 9206 8908 99 ಹಾಗೂ ಮಹೇಶ್ ತಂದೆ ಚಂದ್ರಪ್ಪ ದೂರವಾಣಿಸಂಖ್ಯೆ 88 64 2865 83, ಮಹೇಶ್ ತಂದೆ ಸಹದೇವಪ್ಪ ದೂರವಾಣಿ ಸಂಖ್ಯೆ 98 45 80 45 82 ಈ ಮಕ್ಕಳೊಂದಿಗೆ ಮಾತನಾಡುವ ಮೂಲಕ ನಲಿ ಕಲಿ ಅಭ್ಯಾಸ ಪುಸ್ತಕದಲ್ಲಿನ ಮನೆಗೆಲಸವನ್ನು ನೀಡುವ ಮೂಲಕ ಮಕ್ಕಳಿಗೆ ಬಗ್ಗೆ ಜಾಗೃತಿ ವಹಿಸಲು ತಿಳಿಸಲಾಯಿತು. ಮನೆಯಲ್ಲಿ ಕುಳಿತು ನಿರಂತರ ಅಭ್ಯಾಸವನ್ನು ಮಾಡುತ್ತಾ, ಮುಂದಿನ ಭವಿಷ್ಯತ್ತಿನಲ್ಲಿ ಆಗುವ ತೊಡಕುಗಳನ್ನು ನಿವಾರಿಸುವತ್ತ ಕೆಲವು ಮುಂಜಾಗೃತಾ ಕ್ರಮಗಳನ್ನು ಸೂಚಿಸಲಾಯಿತು.

ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ

         ಇಂದು ದಿನಾಂಕ 30-7-2020 ರಂದು ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ ಮಾಡಲಾಯಿತು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಗುಡಿಗೆ. ಚಿಕ್ಕಮಗಳೂರು ತಾಲೂಕು. ಈ ಶಾಲೆಯ ಶಿಕ್ಷಕಿಯಾದ ಗೀತಾರವರು ತಮ್ಮ ನಲಿ ಕಲಿ ಕೊಠಡಿ ಯ ಪರಿಚಯವನ್ನು ಮಾಡಿಕೊಟ್ಟರು. ಈ ಕೊಠಡಿಯ ವೀಕ್ಷಣೆಯಿಂದ ನಾವು ಸಹ ನಲಿಕಲಿ ಕೊಠಡಿಯನ್ನು ಇನ್ನು ಹೆಚ್ಚಿನ ಆಕರ್ಷಕವಾಗಿ, ವಿಭಿನ್ನವಾಗಿ ನಲಿಕಲಿ ಕೊಠಡಿಯನ್ನು ರೂಪಿಸಬಹುದು ಎಂಬುದನ್ನು ತಿಳಿದುಕೊಂಡೆವು.

ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂಭಾಷಣೆ

    ಇಂದು ದಿನಾಂಕ 30-7-2020 ರಂದು ಮೂರನೇ ತರಗತಿಯ ಮಕ್ಕಳಾದ ಭೀಮಶಂಕರ್ ತಂದೆ ಹನುಮಂತು ದೂರವಾಣಿ ಸಂಖ್ಯೆ 95 91 71 23 72 ಹಾಗೂ ಭವ್ಯಶ್ರೀ ತಂದೆ ಮಹಾದೇವಪ್ಪ ದೂರವಾಣಿ ಸಂಖ್ಯೆ 72 59 85 32 76 ಹಾಗೂ ಭೂಮಿಕಾ ತಂದೆ ಮೋನಪ್ಪ ದೂರವಾಣಿ ಸಂಖ್ಯೆ 9880 1060 76. ಈ ಮಕ್ಕಳೊಂದಿಗೆ ಮಾತನಾಡುವ ಮೂಲಕ ಮಕ್ಕಳ ದಿನನಿತ್ಯದ ಕೆಲಸ ಕಾರ್ಯಗಳನ್ನು ತಿಳಿದುಕೊಳ್ಳುವ ಮೂಲಕ, ಅವರಿಗೆ ನಿರಂತರ ಅಭ್ಯಾಸದಲ್ಲಿ ತೊಡಗಲು ಹೇಳಿ, ಕೊರೋನಾದ ಬಗ್ಗೆ ಹಾಗೂ ಸದ್ಯದ ವಾಸ್ತವ ಪರಿಸ್ಥಿತಿ ಬಗ್ಗೆ ವಿವರಿಸುತ್ತಾ ಇಂದಿನ ಸಂದರ್ಭದಲ್ಲಿ ನಾವು ಯಾವ ರೀತಿಯಾಗಿ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.

*ನಲಿಕಲಿ ಗಣಿತ ವಿಷಯಕ್ಕೆ ಸಂಬಂಧಿಸಿದ ಕಲಿಕೋಪಕರಣಗಳು*

Image

ಯೂಟ್ಯೂಬ್ನಲ್ಲಿ ನಲಿಕಲಿ ಗಣಿತ ವಿಷಯಕ್ಕೆ ಸಂಬಂಧಿಸಿದ ಕಲಿಕೋಪಕರಣದ ವೀಕ್ಷಣೆ

                ಇಂದು ದಿನಾಂಕ 29-7-2020 ರಂದು ಯೂಟ್ಯೂಬ್ನಲ್ಲಿ ಕಲ್ಯಾಣಿ ಹೆಗಡೆ ಜಿ ಹೆಚ್ ಪಿ ಎಸ್ ಅಕ್ಕಿ ಹಳ್ಳಿ. ಹಾನಗಲ್ ಇವರು ನಲಿಕಲಿ ಗಣಿತ ವಿಷಯಕ್ಕೆ ಸಂಬಂಧಿಸಿದ ದಶಕ ಸಹಿತ ಸಂಕಲನ ಮತ್ತು ವ್ಯವಕಲನ ಇವುಗಳಿಗೆ ಸಂಬಂಧಿಸಿದ ಕಲಿಕೋಪಕರಣದ ಬಗ್ಗೆ ತಿಳಿಸಿಕೊಟ್ಟರು. ಈ ಕಲಿಕೋಪಕರಣ ವನ್ನು ಸುಲಭವಾಗಿ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಳ್ಳಲಾಯಿತು.

ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂಭಾಷಣೆ

       ಇಂದು ದಿನಾಂಕ 29-7-2020 ರಂದು ಎರಡನೇ ತರಗತಿಯ ಮಕ್ಕಳಾದ ಬಿಂದುತಂದೆ ಆನಂದ್ ದೂರವಾಣಿ ಸಂಖ್ಯೆ 9741 77 2534 ಹಾಗೂ ಪೂಜಾ ತಂದೆ ಸಿದ್ದರಾಮಪ್ಪ ದೂರವಾಣಿ ಸಂಖ್ಯೆ 72 59 22 48 35 ಹಾಗೂ ಅರುಣ್ ತಂದೆ ಸಿಧ್ಯ ಮಕ್ಕಳೊಂದಿಗೆ ಮಾತನಾಡುವ ಮೂಲಕ ಅವರ ಆರೋಗ್ಯ ವೈಖರಿ ಹಾಗೂ ದಿನಚರಿಯನ್ನು ತಿಳಿದುಕೊಳ್ಳುವ ಮೂಲಕ, ಕೊರೋನಾ ಆವರಿಸಿರುವ ಈ ಸಂದರ್ಭದಲ್ಲಿ ತನ್ನ ಹಾಗೂ ತನ್ನ ಮನೆಯವರ ಕಾಳಜಿಯನ್ನು ಹೇಗೆ ವಹಿಸಬೇಕು ಎಂಬುದರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿಕೊಡಲಾಯಿತು.

*ಶಿಕ್ಷಕರಾದ ನಾವು ಮನೆಯಿಂದಲೇ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡ ಬಗ್ಗೆ ಅನಿಸಿಕೆಗಳು*

        ಶಿಕ್ಷಕರಾದ ನಾವು ಇಂದು ಮನೆಯಿಂದಲೇ ಕುಳಿತುಕೊಂಡು ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳನ್ನು ಹುಡುಕುತ್ತಾ, ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಅವುಗಳಲ್ಲಿ ಕೆಲವು ವಿಷಯಗಳು ನಮ್ಮ ಸ್ಮರಣೆಯ ಆಳದಲ್ಲಿ ಭದ್ರವಾಗಿದ್ದು, ಆ ವಿಷಯಗಳು ನಮ್ಮ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಯಾವಾಗ ತಲುಪಿಸುತ್ತೇವೆ ಎಂಬ ಹಂಬಲ ಮನದಲ್ಲಿ ಆಳವಾಗಿ ಬೇರೂರಿದೆ. ನಾವು ಮನೆಯಿಂದಲೇ ಕುಳಿತು ನಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ನಲ್ಲಿ ಅನೇಕ ವಿಡಿಯೋಗಳನ್ನು ವೀಕ್ಷಣೆ ಮಾಡಿದೆವು. ಆಗ ಕೆಲವು ವಿಷಯಗಳು ಹೀಗೂ ನಾವು ಮಕ್ಕಳಿಗೆ ತಿಳಿಸಿ ಕೊಡಬಹುದು. ಮಕ್ಕಳು ಸುಲಭವಾದ ರೀತಿಯಲ್ಲಿ ವಿಷಯವನ್ನು ಗ್ರಹಿಸುವ ಸುಲಭೋ ಪರಿಗಳು ನಮಗೆ ಮನನ ವಾದವು. ಚಿತ್ರ ಪಾಠದ ಮೂಲಕ, ದೃಶ್ಯ ಪಾಠದ ಮೂಲಕವು ಗಣಿತವನ್ನು ಯಾವ ರೀತಿ ಸುಲಭವಾಗಿ ಕಲಿಸಿ ಕೊಡಬಹುದು ಎಂಬುದರ ಬಗ್ಗೆ ನಮಗೆ ಹಲವಾರು ಮಾರ್ಗಗಳು ಗೋಚರವಾದವು. ಅಲ್ಲದೆ ನಮ್ಮ ಸಹಪಾಠಿಗಳೊಂದಿಗೆ ನಿರಂತರವಾಗಿ ನಮ್ಮ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾ ಹೋದಂತೆಲ್ಲ, ಹಲವಾರು ತಿಳಿಯದ ವಿಷಯಗಳು ನಮಗೆ ತಿಳಿಯಲ್ಪಟ್ಟ ವು ಹಾಗೂ ಮನೆಯಿಂದಲೇ ಕುಳಿತು ಮೊಬೈಲ್ ಮೂಲಕ ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಕೆದಕು ವಂತಾಯಿತು. ಮೊಬೈಲ್ ಬಳಕೆ ಸರಿಯಾದ ರೀತಿಯಲ್ಲಿ ತಿಳಿಯದವರಿಗೂ, ಮೊಬೈಲನ್ನು ಯಾವ ರೀತಿಯಾಗಿ ...

ಯೂಟ್ಯೂಬ್ನಲ್ಲಿ ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಮತ್ತು ಶಿಕ್ಷಕರ ಸಿಸ್ತು ಎಂಬ ವಿಡಿಯೋದ ವೀಕ್ಷಣೆ

           ಇಂದು ದಿನಾಂಕ 28-7-2020 ರಂದು ಯೂಟ್ಯೂಬ್ ನಲ್ಲಿ ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಮತ್ತು ಶಿಕ್ಷಕರ ಶಿಸ್ತು ಕುರಿತಾದ ವಿಡಿಯೋವನ್ನು ವೀಕ್ಷಿಸಲಾಯಿತು. ವಾಸುದೇವ್ ಪಾಟೀಲ್ರವರು ಈ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮಕ್ಕಳ ಶಿಕ್ಷಣದಲ್ಲಿ ಇಂದು  ಮೌಲ್ಯಾಧಾರಿತ ಕಲಿಕೆ ಎನ್ನುವುದು ಕಾಣದಾಗಿದೆ. ಇಂದು ಸಮಾಜದಲ್ಲಿ ನಾವು ಬಹುತೇಕ ಅಪರಾಧಗಳನ್ನು ದಿನನಿತ್ಯವೂ ಕಾಣುತ್ತಿರುತ್ತೇವೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಸರಿಯಾದ ರೀತಿಯಲ್ಲಿ ಕಾಳಜಿವಹಿಸಿ, ಐದು ವರ್ಷಗಳವರೆಗೆ ಮಕ್ಕಳಲ್ಲಿ ನಾವು ಸರಿಯಾದ ಆಲೋಚನೆಗಳನ್ನು ಬೆಳೆಸಿದ್ದೆ ಆದರೆ ಆ ಮಗು ಮುಂದೆ ಒಳ್ಳೆಯ ಮೌಲ್ಯವರ್ದಿತ ಶಿಕ್ಷಣವನ್ನು ಪಡೆಯುತ್ತಾನೆ. ಅಲ್ಲದೆ ಪಾಲಕರಾದವರು ಶಿಕ್ಷಕರ ಬಗ್ಗೆ ಒಳ್ಳೆಯ ಗೌರವವನ್ನು ಹೊಂದಿದ್ದರೆ ಆ ಮಗು ಶಿಕ್ಷಕರ ಬಗ್ಗೆ ಒಳ್ಳೆಯ ಗೌರವವನ್ನು ಒಂದೇ ಅವರ ಮಾತುಗಳಿಗೆ ಬದ್ಧನಾಗಿರುತ್ತಾನೆ. ಅಲ್ಲದೇ ಶಿಕ್ಷಕರಾದವರು ತಾವು ಒಳ್ಳೆಯ ರೀತಿಯಿಂದ ಶಿಸ್ತಿನಿಂದ ನಡೆದುಕೊಂಡಾಗ ಮಗು ಸಹ ಶಿಕ್ಷಕರನ್ನು ಅನುಕರಿಸಿ ಆ ಶಿಸ್ತನ್ನು ತನ್ನೊಳಗೆ ಅನುಷ್ಠಾನಗೊಳಿಸಿ ಕೊಳ್ಳುತ್ತದೆ.ಆದ್ದರಿಂದ ಶಿಕ್ಷಣದಲ್ಲಿ ಮೌಲ್ಯವನ್ನು ಅನುಷ್ಠಾನಗೊಳಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾಗಿದೆ.

ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂಭಾಷಣೆ

            ಇಂದು ದಿನಾಂಕ 28-7-2020 ರಂದು ಮೂರನೇ ತರಗತಿಯ ಅಭಿಷೇಕ್ ತಂದೆ ಶರಣಪ್ಪ ದೂರವಾಣಿಸಂಖ್ಯೆ 9535 79 21 31 ಹಾಗೂ  ಎರಡನೇ ತರಗತಿಯ ಮಕ್ಕಳಾದ ಮಂಜುನಾಥ್ ತಂದೆ ಅಯ್ಯಪ್ಪ ದೂರವಾಣಿ ಸಂಖ್ಯೆ 70 1942 48 07 ಹಾಗೂ ಅನಿತಾ ತಂದೆ ಭೀಮಶಪ್ಪ ದೂರವಾಣಿಸಂಖ್ಯೆ 99 80 23 20 84 ಈ ಮಕ್ಕಳೊಂದಿಗೆ ಮಾತನಾಡುವ ಮೂಲಕ ನಿರಂತರವಾಗಿ ಅಭ್ಯಾಸದಲ್ಲಿ ತೊಡಗಲು ಮನೆಗೆಲಸವನ್ನು ನೀಡುವ ಮೂಲಕ,  ಕೊರ ನಾದ  ಬಗ್ಗೆಮುಂದೆ ಚ್ಚರಿಕೆ ಕ್ರಮಗಳನ್ನು ಹೇಳಲಾಯಿತು.

ಸೇತುಬಂಧ

*ಆರನೇ ತರಗತಿ ಗಣಿತ ವಿಷಯದ ಪೂರ್ವ ಮತ್ತು ಸಾಫಲ್ಯ ಪ್ರಶ್ನೆಗಳು* ಸಾಮರ್ಥ್ಯ 1 1. ನಾಗವೇಣಯು ತನ್ನ ಮೂರು ಮನೆಗಳಿಂದ ಮಾಸಿಕ ರೂ 9750. ರೂ 12500. ರೂ 15300 ಬಾಡಿಗೆ ಪಡೆಯುತ್ತಾಳೆ. ನಾಗವೇಣಿಯು ಪ್ರತಿ ತಿಂಗಳು ಪಡೆಯುವ ಒಟ್ಟು ಬಾಡಿಗೆ ಎಷ್ಟು? 2. 27,232 ರಲ್ಲಿ ಎಷ್ಟನ್ನು ಕಳೆದರೆ 1760 ಆಗುತ್ತದೆ? 3. 2345 ಇದನ್ನು ಸ್ಥಾನಬೆಲೆಗೆ ಅನುಗುಣವಾಗಿ ವಿಸ್ತರಿಸಿ ಬರೆಯಿರಿ. 4. ಒಂದು ಪೆನ್ನಿನ ಬೆಲೆ 5 ರೂಪಾಯಿಗಳಾದರೆ, 5 ಪೆನ್ನು ಗಳ ಬೆಲೆ ಎಷ್ಟು? ಸಾಮರ್ಥ್ಯ 2 1.1/4 ಇದರ ಅಂಶ ಮತ್ತು ಛೇದವನ್ನು ಗುರುತಿಸಿರಿ. 2.13/16 ಮತ್ತು 13/10 ಇವುಗಳ ನಡುವೆ ಸರಿಯಾದ ಚಿನ್ನೆ ಹಾಕು. 3.1/2 ಇದರ 5 ಸಮಾನ ಭಿನ್ನರಾಶಿ ಗಳನ್ನು ಬರೆ. 4. ನಾಲ್ಕನೇ ಐದು ಇದನ್ನು ಭಿನ್ನರಾಶಿಯಲ್ಲಿ ಬರೆ. ಸಾಮರ್ಥ್ಯ 3 1. ಕೋನಗಳ ವಿಧಗಳನ್ನು ಹೆಸರಿಸಿ. 2. A b c d e f g h i j k l m n o p q r p q r s t u v w x y z ಇವುಗಳಲ್ಲಿ ಕೋನ ಉಂಟುಮಾಡುವ ಅಕ್ಷರಗಳನ್ನು ಆರಿಸಿ ಬರೆಯಿರಿ. 3. 7 ಗಂಟೆ 45 ನಿಮಿಷ ಇಲ್ಲಿ  ಉಂಟಾಗುವ ಕೋನವನ್ನು ಹೆಸರಿಸಿ . 4. 90 ಡಿಗ್ರಿ ಅಳತೆ ಕೋನವನ್ನು ರಚಿಸಿ. ಸಾಮರ್ಥ್ಯ 4. 1. ಆಯತದ ಸುತ್ತಳತೆ ಕಂಡುಹಿಡಿಯುವ ಸೂತ್ರ ಬರೆಯಿರಿ. 2. ಚೌಕದಲ್ಲಿ ಎಷ್ಟು ಸಮಾನ ಬಾಹು ಗಳಿರುತ್ತವೆ? 3. ನಿನ್ನ ಗಣಿತ ಅಭ್ಯಾಸ ಪುಸ್ತಕದ ಸುತ್ತಳತೆಯನ್ನು ಕಂಡುಹಿಡಿ. 4. ಎರಡು ಆಯಾಮಗಳನ್ನು ಹೊಂದಿರುವ ಆಕೃತಿಗಳನ್ನು ಏನೆಂದು ಕರೆಯುತ್ತಾರೆ?...

ಆರನೇ ತರಗತಿಯ ಸೇತುಬಂಧ

ವಿಷಯ- ಗಣಿತ               *ಬುನಾದಿ ಸಾಮರ್ಥ್ಯಗಳು* 1. ಸಾವಿರ ಮೇಲ್ಪಟ್ಟ ಸಂಖ್ಯೆಗಳನ್ನು ಬಳಸಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಬಿಡಿಸುವರು ನಿತ್ಯ ಜೀವನದಲ್ಲಿ ಇದನ್ನು ಅನ್ವಯಿಸಿ ಕೊಳ್ಳಲು ಸಮರ್ಥ ರಾಗುವರು. 2. ಭಿನ್ನರಾಶಿಗಳು ಹಾಗೂ ದಶಮಾಂಶಗಳ ಮೇಲಿನ ಸಮಸ್ಯೆಗಳನ್ನು ಬಿಡಿಸುವರು. 3. ಕೋನಗಳ ವಿಧಗಳನ್ನು ಗುರುತಿಸಿ ಸರಿಯಾಗಿ ಅಳೆದು ಹೆಸರಿಸುವರು. 4. ಘನಕೃತಿಗಳಾದ ಕೋನ, ಸ್ತಂಭ, ಚೌಕ, ಘನ ಮತ್ತು ಆಯತಘನ ಕೃತಿಗಳನ್ನು ಮಾಡುವರು. 5. ಉದ್ದ, ತೂಕ  ಮತ್ತು ಗಾತ್ರಗಳನ್ನು ಅಂದಾಜು ಮಾಡಿ ಅಳೆಯುವರು ಮತ್ತು ನಿತ್ಯಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವ ರು.

ಯೂಟ್ಯೂಬ್ನಲ್ಲಿ ಏಳನೇ ತರಗತಿಯ ಗಣಿತ ಪಾಠ ವೀಕ್ಷಣೆ

                 ಇಂದು ದಿನಾಂಕ 27-7-2020 ರಂದು ಯೂಟ್ಯೂಬ್ನಲ್ಲಿ ಏಳನೇ ತರಗತಿಯ ಸಚಿನ್ ಕುಮಾರ್ ಹಿರೇಮಠ ಸರ್ ಅವರ ಘಟಕ1 ಪೂರ್ಣಾಂಕಗಳು ಪಾಠವನ್ನು ವೀಕ್ಷಣೆ ಮಾಡಲಾಯಿತು. ಪೂರ್ಣಾಂಕ ಗಳಲ್ಲಿ ಧನ ಮತ್ತು ಋಣ ಪೂರ್ಣ ಸಂಖ್ಯೆ ಗಳಿರುತ್ತವೆ. ಭಿನ್ನರಾಶಿಗಳು ಮಾತ್ರ ಇಲ್ಲಿ ಬರುವುದಿಲ್ಲ. ಅನೇಕ ಸಮಸ್ಯೆಗಳನ್ನು ಸಂಖ್ಯಾರೇಖೆಯ ಮೇಲೆ ಸುಲಭವಾಗಿ ತಿಳಿಸಿಕೊಡಲಾಯಿತು. ಈ ಘಟಕವು ಎಲ್ಲರಿಗೂ ಸರಳವಾಗಿ ಅರ್ಥವಾಗುವಂತೆ ಮೂಡಿಬಂದಿದೆ.

ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂಭಾಷಣೆ

          ಇಂದು ದಿನಾಂಕ 27-7-2020 ರಂದು ಮೂರನೇ ತರಗತಿಯ ಮಕ್ಕಳಾದ ಪೌರ್ಣಮಿ ತಂದೆ ಕಾಶಪ್ಪ ದೂರವಾಣಿ ಸಂಖ್ಯೆ 87 48 92 559 32 ಹಾಗೂ ರೇಣುಕಾ ತಂದೆ ನರಸಪ್ಪ ದೂರವಾಣಿ ಸಂಖ್ಯೆ 91 67 79 23 75 ಹಾಗೂ ಸಿದ್ಧಾರ್ಥ ತಂದೆ ರಮೇಶ್ ದೂರವಾಣಿ ಸಂಖ್ಯೆ 96 63 34 5 0 31 ಮಕ್ಕಳೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸುವ ಮೂಲಕ ಅವರ ದಿನನಿತ್ಯದ ಕೆಲಸ ಕಾರ್ಯಗಳನ್ನು ತಿಳಿದುಕೊಳ್ಳುವ ಮೂಲಕ, ಕೊರೋನಾದ ಈ ಸಂದರ್ಭದಲ್ಲಿ ಅವರ ಜೀವನಶೈಲಿ ಹೇಗಿರಬೇಕು ಎಂಬುದರ ಬಗ್ಗೆ ಹಾಗೂ ಅವರು ಕೊರೋನಾದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು. ಜೊತೆಗೆ ಮಕ್ಕಳಿಗೆ ಮನೆಗೆಲಸವನ್ನು ನೀಡಲಾಯಿತು.

ಯೂಟ್ಯೂಬ್ನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಗಣಿತ (ಸಂಖ್ಯಾ ಪದ್ಧತಿ)

                 ಇಂದು ದಿನಾಂಕ 26-7-2020 ರಂದು ಯೂಟ್ಯೂಬ್ನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಗಣಿತ (ಸಂಖ್ಯಾ ಪದ್ಧತಿ) ಬಗ್ಗೆ ಯಾಕುಬ್  ಕುಷಾರ್ ಸರ್ ಅವರು ಸ್ವಾಭಾವಿಕ ಸಂಖ್ಯೆಗಳು, ಪೂರ್ಣ ಸಂಖ್ಯೆಗಳು, ಪೂರ್ಣಾಂಕಗಳು, ಭಾಗಲಬ್ದ ಸಂಖ್ಯೆಗಳು ಇವುಗಳ ಬಗ್ಗೆ ತುಂಬಾ ಸರಳವಾಗಿ ವಿಸ್ತಾರವಾಗಿ ಅರ್ಥವಾಗುವಂತೆ ತಿಳಿಸಿಕೊಟ್ಟರು.

ನಲಿಕಲಿ ಗಣಿತದ ಕಲಿಕೋಪಕರಣಗಳು

Image

ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂಭಾಷಣೆ

ಇಂದು ದಿನಾಂಕ 26-7-2020 ರಂದು ಮೂರನೇ ತರಗತಿಯ ಮಕ್ಕಳಾದ ಮೋನಿಕ ತಂದೆ ಮಾಣಿಕ್ಯಪ್ಪ ದೂರವಾಣಿ ಸಂಖ್ಯೆ 95 35 32 32 01 ಹಾಗೂ ನಾಗವೇಣಿ ತಂದೆ ದೊಡ್ಡ ಭೀಮಶಪ್ಪ ದೂರವಾಣಿ ಸಂಖ್ಯೆ 95 46 92 77 60 ಹಾಗೂ ನರೇಶ್ ತಂದೆ ಮಾಣಿಕಪ್ಪ ದೂರವಾಣಿ ಸಂಖ್ಯೆ 70 26 65 56 91 ಈ ಮಕ್ಕಳ ದಿನಚರಿಯನ್ನು ಕೇಳುವ ಮೂಲಕ, ಮಕ್ಕಳಿಗೆ ನಲಿಕಲಿ ಮನೆಗೆಲಸವನ್ನು ನೀಡುವ ಮೂಲಕ, ಕೊರೋನಾ ಬಗ್ಗೆ ಜಾಗೃತಿ ಕ್ರಮಗಳ ಬಗ್ಗೆಯೂ ಮುಂದೆ ಚ್ಚರಿಕೆ ವಹಿಸುವಂತೆ ತಿಳಿ ಹೇಳಲಾಯಿತು.

*ಯೂಟ್ಯೂಬ್ ನಲ್ಲಿ ಆರನೇ ತರಗತಿಯ ಗಣಿತ ಪಾಠ ವೀಕ್ಷಣೆ*

                     ಇಂದು ದಿನಾಂಕ 25 -7-2020 ರಂದು ಯೂಟ್ಯೂಬ್ನಲ್ಲಿ ಆರನೇ ತರಗತಿಯಸಂಖ್ಯೆಗಳನ್ನು ತಿಳಿಯಿರಿ ಭಾಗ-1 (ಎನ್ ಸಿ ಇ ಆರ್ ಟಿ) ಗಣಿತ ಪಾಠವನ್ನು ವೀಕ್ಷಣೆ ಮಾಡಲಾಯಿತು. ಇಲ್ಲಿ ಸಂಖ್ಯೆಗಳನ್ನು ವಿಸ್ತಾರ ರೂಪದಲ್ಲಿ ಬರೆಯುವುದು, ಸಂಖ್ಯೆಗಳ ಸ್ಥಾನಬೆಲೆ,ಚಿಕ್ಕ ಸಂಖ್ಯೆ ದೊಡ್ಡ ಸಂಖ್ಯೆ ಹಾಗೂ ಹಲವಾರು ಸಮಸ್ಯೆಗಳನ್ನು ತುಂಬಾ ಸರಳವಾಗಿ ಲಾಲಿ ಮತ್ತು ರೋನು ಕಥೆಯ ಮೂಲಕ ತಿಳಿಸಿಕೊಡಲಾಯಿತು.

*ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂಭಾಷಣೆ*

              ಇಂದು ದಿನಾಂಕ 25-7-2020 ರಂದು ಮೂರನೇ ತರಗತಿಯ ವಿದ್ಯಾರ್ಥಿಗಳಾದ ಮಹೇಶ್ವರಿ ತಂದೆ ಮಾಣಿಕ್ಯಪ್ಪ ದೂರವಾಣಿ ಸಂಖ್ಯೆ 9902 70 4948 ಹಾಗೂ ಲಕ್ಷ್ಮಪ್ಪ 90 09 80 1139 ಹಾಗೂ ಮಂಜುಳಾ ತಂದೆ ಕಾಶಪ್ಪ ದೂರವಾಣಿ ಸಂಖ್ಯೆ 8147 2 71 55 6 ಈ ಮಕ್ಕಳ ನಿತ್ಯ ದಿನಚರಿಯನ್ನು ತಿಳಿದುಕೊಳ್ಳುವ ಮೂಲಕ, ಹಿಂದಿನ ಶೈಕ್ಷಣಿಕ ವರ್ಷದ ನಲಿಕಲಿ ಅಭ್ಯಾಸ ಪುಸ್ತಕದಲ್ಲಿನ ಬರಹವನ್ನು ಪುನಹ ಪುನಹ ಬರೆದು ಅಭ್ಯಾಸಮಾಡಲು ತಿಳಿಸಲಾಯಿತು.

ಏಳನೇ ತರಗತಿಯ ಸೇತುಬಂಧ

        * ಪೂರ್ವ ಹಾಗೂ ಸಾಫಲ್ಯ ಪರೀಕ್ಷೆಯ ಪ್ರಶ್ನೆಗಳು*       ಸಾಮರ್ಥ್ಯ 1.  1. ಮೂರು ಲಕ್ಷದ ಎಪ್ಪತ್ತೈದು ಸಾವಿರದ ಮುನ್ನೂರ ಏಳು ಇದನ್ನು ಸಂಖ್ಯೆಯಲ್ಲಿ ಬರೆದು ಅಲ್ಪವಿರಾಮ ಗಳನ್ನು ಹಾಕಿ. 2. ಇಪ್ಪತ್ತಮೂರು ಲಕ್ಷದ ಮೂವತ್ತು ಸಾವಿರದ ಹತ್ತು ಇದನ್ನು ಸಂಖ್ಯೆಯಲ್ಲಿ ಬರೆದು ಅಲ್ಪವಿರಾಮ ಗಳನ್ನು ಹಾಕಿ. 3. 6,2,7,4,3 ಈ ಪ್ರತಿಯೊಂದು ಸಂಖ್ಯೆಯನ್ನು ಒಂದು ಬಾರಿ ಮಾತ್ರ ಬಳಸಿ ಬರೆಯಬಹುದಾದ ಅತಿದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಿರಿ. 4.3,8,1,2,5 ಈ ಪ್ರತಿಯೊಂದು ಸಂಖ್ಯೆಯನ್ನು ಒಂದು ಬಾರಿ ಮಾತ್ರ ಬಳಸಿ ಬರೆಯಬಹುದಾದ ಅತಿ ಚಿಕ್ಕ ಸಂಖ್ಯೆಯನ್ನು ಕಂಡುಹಿಡಿಯಿರಿ. ಸಾಮರ್ಥ್ಯ 2. 1. ಅತ್ಯಂತ ಚಿಕ್ಕ ಪೂರ್ಣ ಸಂಖ್ಯೆ ಯಾವುದು? 2. 10000 ಈ ಸಂಖ್ಯೆಯ ಹಿಂದಿನ ಸಂಖ್ಯೆ ಯಾವುದು? 3. 5999 ಈ ಸಂಖ್ಯೆಯ ಮುಂದಿನ ಸಂಖ್ಯೆ ಯಾವುದು? 4. 10999 ನಂತರದ ಮೂರು ಸ್ವಾಭಾವಿಕ ಸಂಖ್ಯೆಗಳನ್ನು ಬರೆಯಿರಿ. ಸಾಮರ್ಥ್ಯ 3. 1. 24 ಈ ಸಂಖ್ಯೆಯ ಎಲ್ಲಾ ಅಪವರ್ತನಗಳನ್ನು ಬರೆಯಿರಿ. 2. 1 ರ ಅಪವರ್ತನ ಗಳ ಸಂಖ್ಯೆ ಎಷ್ಟು? 3. ಅತ್ಯಂತ ಚಿಕ್ಕ ಸಮ ಸಂಖ್ಯೆ ಯಾವುದು? 4. 18, 48 ಈ ಸಂಖ್ಯೆಗಳ ಮ.ಸಾ.ಅ ಕಂಡುಹಿಡಿಯಿರಿ. ಸಾಮರ್ಥ್ಯ 4. 1. ತೆರೆದ ವಕ್ರರೇಖೆ, ಆವೃತ ವಕ್ರರೇಖೆ ಗೆ ಕಚ್ಚಾ ಚಿತ್ರಗಳನ್ನು ಎಳೆಯಿರಿ. 2. ವೃತ್ತದಲ್ಲಿ ವ್ಯಾಸ ಎಂದರೇನು? 3. ಎರಡು ಬಿಂದುಗಳ ನಡುವಿನ ಕನಿಷ್ಠ ದೂರ ವನ್ನು ...

ಯೂಟ್ಯೂಬ್ನಲ್ಲಿ ಐದನೇ ತರಗತಿಯ ಗಣಿತ ಪಾಠ ವೀಕ್ಷಣೆ

              ಇಂದು ದಿನಾಂಕ 24-7-2020 ರಂದು ಯೂಟ್ಯೂಬ್ನಲ್ಲಿ 5ನೇತರಗತಿಯ ಲ .ಸಾ.ಅ ಮತ್ತುಮ.ಸಾ.ಅ ಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಸಿದ್ದು ಕುಂಬಾರ ಸರ್ ಅವರು ಇವುಗಳ ಬಗ್ಗೆ ತುಂಬಾ ಚೆನ್ನಾಗಿ ಅರ್ಥವಾಗುವಂತೆ ತಿಳಿಸಿಕೊಟ್ಟರು.

ದಿನಾಂಕ 24 -7-2020 ದೂರವಾಣಿ ಕರೆ ಮೂಲಕ ಮಕ್ಕಳೊಂದಿಗೆ ಮಾತುಕತೆ

ಇಂದು 1 )ನಾಲ್ಕನೇತರಗತಿಯ ನಂದಕಿಶೋರ್ ತಂದೆ ಮಹೇಶ್ ದೂರವಾಣಿ ಸಂಖ್ಯೆ 900 8728 514.            2) ನಾಲ್ಕನೇ ತರಗತಿಯ ಶ್ರೀನಿವಾಸ್ ತಂದೆ ವೆಂಕಟಪ್ಪ ದೂರವಾಣಿಸಂಖ್ಯೆ 9972913991.             3) ಮೂರನೇ ತರಗತಿಯ ಮದುಪ್ರಿಯ ತಂದೆ ಅಯ್ಯಪ್ಪ ದೂರವಾಣಿ ಸಂಖ್ಯೆ 9591452805. ಈ ಮೂವರು ವಿದ್ಯಾರ್ಥಿಗಳೊಂದಿಗೆ ಮಾತನಾಡುವ ಮೂಲಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಮುಂದಿನ ದಿನಗಳಲ್ಲಿ ಶಾಲೆಗೆ ಸಿದ್ಧರಾಗಲು ಆತ್ಮಸ್ಥೈರ್ಯವನ್ನು ತುಂಬಲಾಯಿತು.

*ಕೋವಿಡ್ 19 ವೈರಸ್ ಸೋಂಕಿನ ಕುರಿತಾದ ಜಾಗೃತಿ ಕ್ರಮಗಳು*

           ಇಂದಿನ ನಮ್ಮ ಜಾಗತಿಕ ಪ್ರಪಂಚದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೆಡೆ ಕೇಳುತ್ತಿರುವ ಶಬ್ದವೆಂದರೆ ಕೊರೋನಾ ಕೊರೋನಾ. ಈ ಕೊರೋನಾ ಎಂಬ ಹೆಮ್ಮಾರಿ ನಮ್ಮ ಭಾರತ ದೇಶದಲ್ಲಿ ಅಷ್ಟೇ ಅಲ್ಲದೆ ಇಡೀ ಪ್ರಪಂಚ ವ್ಯಾಪಿಯಾಗಿ ತನ್ನ ರುದ್ರ ನರ್ತನವನ್ನು ಮಾಡುತ್ತಿದೆ. ಕಣ್ಣಿಗೆ ಕಾಣದ ಒಂದು ಅತಿ ಸೂಕ್ಷ್ಮ ವೈರಸ್ ದೈತ್ಯ ನಾದ ಮನುಷ್ಯನ ನಿದ್ದೆಯನ್ನು ಹಾಳು ಮಾಡಿದೆ.                                           ಕೊರೋನಾ ಎಂಬ ರಾಕ್ಷಸ ಎಲ್ಲಿ? ಯಾವಾಗ? ಹೇಗೆ? ಯಾವ ದಿಕ್ಕಿನಿಂದ ನಮ್ಮನ್ನು ಆವರಿಸುತ್ತೋ ಎಂಬ ಭಯ ನಮ್ಮನ್ನು ಕ್ಷಣಕ್ಷಣಕ್ಕೂ ಕಾಡುತ್ತಿದೆ. ಈ ಕೊರೋನಾ ಎಂಬುದು ನಮ್ಮ ಜೀವನದಲ್ಲಿ ಮಾನಸಿಕವಾಗಿ, ದೈ,ಹಿಕವಾಗಿ, ಆರ್ಥಿಕವಾಗಿಯೂ ಎಲ್ಲಾ ರೀತಿಯಿಂದಲೂ ನಮ್ಮನ್ನು ಕುಗ್ಗಿಸಿದೆ.                                   ಜಗತ್ತಿನ ಸೃಷ್ಟಿಯಾದಾಗ ಮಾನವನೊಂದಿಗೆ ಅನೇಕ ವೈರಸ್ ಗಳು ಸಹ ಜನ್ಮತಾಳಿದವು. ನೆಗಡಿ , ಜ್ವರದಂತೆ ಕೊರೋಣ ಎಂಬುದು ಒಂದು ವ್ಯಾಧಿ. ಕೆಲವು ಮುಂಜಾಗೃತ ಕ್ರಮಗಳಿಂದ ನಾವು ಈ ಕೊರೋನಾ ವನ್ನು ಬುಡ ಸಮೇತವಾಗಿ ನಮ್ಮ ದೇಶದಿಂದ ಹೊ...

ದಿನಾಂಕ 23 -7- 202೦

                     ಇಂದು ಯೂಟ್ಯೂಬ್ನಲ್ಲಿ ಡಿ ಎಸ್ ಇ ಆರ್ ಟಿ ನಿರ್ದೇಶನದ ಯೋಗೀಶ್ ರೆಡ್ಡಿಯವರ ನಿರೂಪಣೆಯ ಐದನೇ ತರಗತಿಯ ಗಣಿತ ಚಿತ್ರ ಪಾಠದಲ್ಲಿ ವಿನ್ಯಾಸಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಮಕ್ಕಳಿಗೆ ಈ ಚಿತ್ರ ಪಾಠದಲ್ಲಿ ಮಾತನಾಡುವ ಬೊಂಬೆಯ ಮೂಲಕ ತುಂಬಾ ಕುತೂಹಲದಿಂದ ವಿವಿಧ ವಿನ್ಯಾಸಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಡಲಾಯಿತು. ಮಕ್ಕಳು ಆಸಕ್ತಿಯಿಂದ ಆಟದ ಮೂಲಕ ರೇಖಾಖಂಡ, ತ್ರಿಭುಜ, ವರ್ಗ, ವರ್ಗಸಂಖ್ಯೆ ಇವುಗಳ ಬಗ್ಗೆ ತುಂಬಾ ಚೆನ್ನಾಗಿ ಮಕ್ಕಳ ಮನಮುಟ್ಟುವಂತೆ ಚಿತ್ರ ಪಾಠವು ಮೂಡಿಬಂದಿದೆ.

ಸೇತುಬಂಧ

೭ನೇ ತರಗತಿ.                                     ಗಣಿತ *ಬುನಾದಿ ಸಾಮರ್ಥ್ಯ ಗಳು* ೧.ಐದಂಕಿ ಸಂಖ್ಯೆ ಗಳ ಬಗ್ಗೆ ಪೂರ್ಣ ಜ್ಞಾನ ವನ್ನು ಹೊಂದುವರು.ಕನಿಷ್ಠ, ಗರಿಷ್ಠ ಸಂಖ್ಯೆಗಳನ್ನು ಕಂಡುಹಿಡಿಯುವರು. ನೂರರ ಸ್ಥಾನಕ್ಕೆ   ಅಂದಾಜು ಮಾಡಲು ಸಮರ್ಥರಾಗುವರು.    ೨.ಪೂರ್ಣ ಸಂಖ್ಯೆ ಗಳ ಬಗ್ಗೆ ತಿಳಿದುಕೊಳ್ಳುವುದು. ಹಿಂದಿನ ಸಂಖ್ಯೆ ಹಾಗೂ ಮುಂದಿನ ಸಂಖ್ಯೆ ಗಳನ್ನು ಬರೆಯಲು ಸಮರ್ಥರಾಗುವರು. ೩.ಅಪವರ್ತನ ಹಾಗೂ ಅಪವರ್ತ್ಯಗಳ ಬಗ್ಗೆ ಹಾಗೂ ಮ.ಸಾ.ಅ, ಲ.ಸಾ.ಅಗಳ ಬಗ್ಗೆ ತಿಳಿದುಕೊಳ್ಳುವರು. ೪. ರೇಖಾಗಣಿತದ ಮೂಲಭೂತ ಅಂಶಗಳಾದ ರೇಖೆ, ಬಹುಭುಜಾಕೃತಿಗಳು, ತ್ರಿಭುಜಗಳು , ವೃತ್ತಗಳ ಬಗ್ಗೆ ತಿಳಿದುಕೊಳ್ಳುವರು. ೫. ಭಿನ್ನರಾಶಿ ಗಳ ಬಗ್ಗೆ ಹಾಗೂ ಅವುಗಳ ವಿಧಗಳ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳುವರು.