*ಕೋವಿಡ್ 19 ವೈರಸ್ ಸೋಂಕಿನ ಕುರಿತಾದ ಜಾಗೃತಿ ಕ್ರಮಗಳು*

           ಇಂದಿನ ನಮ್ಮ ಜಾಗತಿಕ ಪ್ರಪಂಚದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೆಡೆ ಕೇಳುತ್ತಿರುವ ಶಬ್ದವೆಂದರೆ ಕೊರೋನಾ ಕೊರೋನಾ. ಈ ಕೊರೋನಾ ಎಂಬ ಹೆಮ್ಮಾರಿ ನಮ್ಮ ಭಾರತ ದೇಶದಲ್ಲಿ ಅಷ್ಟೇ ಅಲ್ಲದೆ ಇಡೀ ಪ್ರಪಂಚ ವ್ಯಾಪಿಯಾಗಿ ತನ್ನ ರುದ್ರ ನರ್ತನವನ್ನು ಮಾಡುತ್ತಿದೆ. ಕಣ್ಣಿಗೆ ಕಾಣದ ಒಂದು ಅತಿ ಸೂಕ್ಷ್ಮ ವೈರಸ್ ದೈತ್ಯ ನಾದ ಮನುಷ್ಯನ ನಿದ್ದೆಯನ್ನು ಹಾಳು ಮಾಡಿದೆ.
                             
            ಕೊರೋನಾ ಎಂಬ ರಾಕ್ಷಸ ಎಲ್ಲಿ? ಯಾವಾಗ? ಹೇಗೆ? ಯಾವ ದಿಕ್ಕಿನಿಂದ ನಮ್ಮನ್ನು ಆವರಿಸುತ್ತೋ ಎಂಬ ಭಯ ನಮ್ಮನ್ನು ಕ್ಷಣಕ್ಷಣಕ್ಕೂ ಕಾಡುತ್ತಿದೆ. ಈ ಕೊರೋನಾ ಎಂಬುದು ನಮ್ಮ ಜೀವನದಲ್ಲಿ ಮಾನಸಿಕವಾಗಿ, ದೈ,ಹಿಕವಾಗಿ, ಆರ್ಥಿಕವಾಗಿಯೂ ಎಲ್ಲಾ ರೀತಿಯಿಂದಲೂ ನಮ್ಮನ್ನು ಕುಗ್ಗಿಸಿದೆ.
                  
               ಜಗತ್ತಿನ ಸೃಷ್ಟಿಯಾದಾಗ ಮಾನವನೊಂದಿಗೆ ಅನೇಕ ವೈರಸ್ ಗಳು ಸಹ ಜನ್ಮತಾಳಿದವು. ನೆಗಡಿ , ಜ್ವರದಂತೆ ಕೊರೋಣ ಎಂಬುದು ಒಂದು ವ್ಯಾಧಿ. ಕೆಲವು ಮುಂಜಾಗೃತ ಕ್ರಮಗಳಿಂದ ನಾವು ಈ ಕೊರೋನಾ ವನ್ನು ಬುಡ ಸಮೇತವಾಗಿ ನಮ್ಮ ದೇಶದಿಂದ ಹೊಡೆದೋಡಿಸಬಹುದು.          

                 ನೆಗಡಿ, ಗಂಟಲು ಕೆರೆತ, ಒಣ ಕೆಮ್ಮು, ಅತಿಯಾದ ಜ್ವರ ಇವು ಕೊರೋನಾದ ಸಾಮಾನ್ಯ ಲಕ್ಷಣಗಳು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸರಕಾರ ಕಾಲಕಾಲಕ್ಕೂ ಸೂಚಿಸಿದ ಸೂಚನೆಗಳನ್ನು ಸರಿಯಾಗಿ ನಾವೆಲ್ಲರೂ ಪಾಲಿಸಬೇಕು. ಬೇಕಾಬಿಟ್ಟಿಯಾಗಿ ಮನೆಯಿಂದ ಹೊರಗೆ ತೆರಳುವುದು ಮಾಡದೆ  , ಮನೆಯಲ್ಲಿಯೇ ಇದ್ದು ಒಳ್ಳೆಯ ಸಮತೋಲನ ಯುಕ್ತವಾದ ಆಹಾರವನ್ನು ಸೇವನೆ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.

             ಕರೋನ ವನ್ನು ದೂರ ಬಿಡಬೇಕಾದರೆ ನಮ್ಮ ಮನಸ್ಸಿನಲ್ಲಿರುವ ಭಯವನ್ನು ದೂರವಿಡಬೇಕು. ಹೃದಯ ಹರ್ಷಿತ ವಾಗಿದ್ದರೆ ಅದೇ ದಿವ್ಯ ಔಷಧಿ ಇದ್ದಂತೆ. ನಾವು ಸದಾ ನಗುತ್ತಾ, ಖುಷಿಯಾಗಿ, ಒಳ್ಳೆಯ ಸಮತೋಲನ ಆಹಾರ ಸೇವಿಸುತ್ತಾ, ಹೆಚ್ಚಿನ ನೀರನ್ನು ಕುಡಿಯುತ್ತಾ, ಒಳ್ಳೆಯ ಗಾಳಿಯನ್ನು ಸೇವಿಸುತ್ತಾ ಆತ್ಮಸ್ಥೈರ್ಯದಿಂದ ಇದ್ದರೆ ಕೊರೋನಾ ನಮ್ಮ ಹತ್ತಿರ ಸುಳಿಯುವುದಿಲ್ಲ.

           ಅಗತ್ಯವಿದ್ದಾಗ ನಾವು ಮನೆಯಿಂದ ಹೊರಗೆ ತೆರಳಿದಾಗ ಕಡ್ಡಾಯವಾಗಿ ಮಾಸ್ಕನ್ನು ಧರಿಸಲೇಬೇಕು. ನಮ್ಮ ಕೈಗಳನ್ನು ಮುಖದ ಮೇಲಾಗಲಿ, ಕಣ್ಣುಗಳಿಗೆ ಆಗಲಿ ತಾಕಿಸದೇ, ಮನೆಗೆ ತೆರಳಿದ ತಕ್ಷಣ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ನಂತರ ಮುಖವನ್ನು ಸಹ ಸಾಬೂನಿನಿಂದ ಸ್ವಚ್ಛವಾಗಿ ಶುಚಿಗೊಳಿಸಬೇಕು.

"ಶಿಕ್ಷಕರಾದ ನಾವು ಈ ಕೊರನಾ ಸಂದರ್ಭದಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಮಕ್ಕಳ ಕಲಿಕೆಯನ್ನು ಉತ್ಕೃಷ್ಟ ಗೊಳಿಸಬೇಕಾಗಿದೆ."

                  ದೂರವಾಣಿ ಮೂಲಕ ಮಕ್ಕಳನ್ನು ಸಂಪರ್ಕಿಸಿ ಅವರ ದಿನನಿತ್ಯದ ಜೀವನ ವೈಖರಿಯನ್ನು ತಿಳಿದುಕೊಂಡು,ಮಕ್ಕಳಿಗೆ ಸರಿಯಾದ ರೀತಿಯಲ್ಲಿ ನಾವು ಮಾರ್ಗದರ್ಶನ ಮಾಡಬೇಕಿದೆ. ಅಲ್ಲದೆ ಬೇಕಾಬಿಟ್ಟಿಯಾಗಿ ಬೇಕಾಬಿಟ್ಟಿಯಾಗಿ ಹೊರಗೆ ಓಡಾಡುವುದನ್ನು ತಪ್ಪಿಸಿ, ಅವರಿಗೆ ಸರ್ಕಾರ ಸೂಚಿಸಿದ ಅಭ್ಯಾಸ ಪುಸ್ತಕದ ಪಿಡಿಎಫ್ ಮಾದರಿಯನ್ನು ತಿಳಿಸಿಕೊಟ್ಟು, ಮಕ್ಕಳನ್ನು ನಿರಂತರವಾಗಿ ಕಲಿಕೆಯಲ್ಲಿ ತೊಡಗುವಂತೆ ಯೋಚಿಸಬೇಕಾಗಿದೆ. ಮಕ್ಕಳಿಗೆ ನಿರಂತರವಾಗಿ ಕೊರೋನಾದ ಆಗು-ಹೋಗುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿಕೊಡುವುದು. ಪೌಷ್ಟಿಕ ಯುತವಾದ ಆಹಾರ ಸೇವನೆಗೆ ಸೂಚಿಸುವುದು. ಮಕ್ಕಳಲ್ಲಿ ಸರ್ವತೋಮುಖವಾಗಿ ಕಲಿಕೆಗೆ ಸಹಾಯಕವಾಗುವ ದಲ್ಲದೆ, ಕೊರೋನಾದ ಬಗ್ಗೆ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿ ಮುಂದಿನ ದಿನಗಳಲ್ಲಿ ಶಾಲೆಗೆ ಬರುವಲ್ಲಿ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂಬ ಬಗ್ಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು.


Comments

Popular posts from this blog

ದಿನಾಂಕ 23 -7- 202೦

ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ

ಸೇತುಬಂಧ