ಇಂದು ದಿನಾಂಕ 24-7-2020 ರಂದು ಯೂಟ್ಯೂಬ್ನಲ್ಲಿ 5ನೇತರಗತಿಯ ಲ .ಸಾ.ಅ ಮತ್ತುಮ.ಸಾ.ಅ ಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಸಿದ್ದು ಕುಂಬಾರ ಸರ್ ಅವರು ಇವುಗಳ ಬಗ್ಗೆ ತುಂಬಾ ಚೆನ್ನಾಗಿ ಅರ್ಥವಾಗುವಂತೆ ತಿಳಿಸಿಕೊಟ್ಟರು.
ಇಂದು ಯೂಟ್ಯೂಬ್ನಲ್ಲಿ ಡಿ ಎಸ್ ಇ ಆರ್ ಟಿ ನಿರ್ದೇಶನದ ಯೋಗೀಶ್ ರೆಡ್ಡಿಯವರ ನಿರೂಪಣೆಯ ಐದನೇ ತರಗತಿಯ ಗಣಿತ ಚಿತ್ರ ಪಾಠದಲ್ಲಿ ವಿನ್ಯಾಸಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಮಕ್ಕಳಿಗೆ ಈ ಚಿತ್ರ ಪಾಠದಲ್ಲಿ ಮಾತನಾಡುವ ಬೊಂಬೆಯ ಮೂಲಕ ತುಂಬಾ ಕುತೂಹಲದಿಂದ ವಿವಿಧ ವಿನ್ಯಾಸಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಡಲಾಯಿತು. ಮಕ್ಕಳು ಆಸಕ್ತಿಯಿಂದ ಆಟದ ಮೂಲಕ ರೇಖಾಖಂಡ, ತ್ರಿಭುಜ, ವರ್ಗ, ವರ್ಗಸಂಖ್ಯೆ ಇವುಗಳ ಬಗ್ಗೆ ತುಂಬಾ ಚೆನ್ನಾಗಿ ಮಕ್ಕಳ ಮನಮುಟ್ಟುವಂತೆ ಚಿತ್ರ ಪಾಠವು ಮೂಡಿಬಂದಿದೆ.
ಇಂದು ದಿನಾಂಕ 30-7-2020 ರಂದು ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ ಮಾಡಲಾಯಿತು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಗುಡಿಗೆ. ಚಿಕ್ಕಮಗಳೂರು ತಾಲೂಕು. ಈ ಶಾಲೆಯ ಶಿಕ್ಷಕಿಯಾದ ಗೀತಾರವರು ತಮ್ಮ ನಲಿ ಕಲಿ ಕೊಠಡಿ ಯ ಪರಿಚಯವನ್ನು ಮಾಡಿಕೊಟ್ಟರು. ಈ ಕೊಠಡಿಯ ವೀಕ್ಷಣೆಯಿಂದ ನಾವು ಸಹ ನಲಿಕಲಿ ಕೊಠಡಿಯನ್ನು ಇನ್ನು ಹೆಚ್ಚಿನ ಆಕರ್ಷಕವಾಗಿ, ವಿಭಿನ್ನವಾಗಿ ನಲಿಕಲಿ ಕೊಠಡಿಯನ್ನು ರೂಪಿಸಬಹುದು ಎಂಬುದನ್ನು ತಿಳಿದುಕೊಂಡೆವು.
*ಆರನೇ ತರಗತಿ ಗಣಿತ ವಿಷಯದ ಪೂರ್ವ ಮತ್ತು ಸಾಫಲ್ಯ ಪ್ರಶ್ನೆಗಳು* ಸಾಮರ್ಥ್ಯ 1 1. ನಾಗವೇಣಯು ತನ್ನ ಮೂರು ಮನೆಗಳಿಂದ ಮಾಸಿಕ ರೂ 9750. ರೂ 12500. ರೂ 15300 ಬಾಡಿಗೆ ಪಡೆಯುತ್ತಾಳೆ. ನಾಗವೇಣಿಯು ಪ್ರತಿ ತಿಂಗಳು ಪಡೆಯುವ ಒಟ್ಟು ಬಾಡಿಗೆ ಎಷ್ಟು? 2. 27,232 ರಲ್ಲಿ ಎಷ್ಟನ್ನು ಕಳೆದರೆ 1760 ಆಗುತ್ತದೆ? 3. 2345 ಇದನ್ನು ಸ್ಥಾನಬೆಲೆಗೆ ಅನುಗುಣವಾಗಿ ವಿಸ್ತರಿಸಿ ಬರೆಯಿರಿ. 4. ಒಂದು ಪೆನ್ನಿನ ಬೆಲೆ 5 ರೂಪಾಯಿಗಳಾದರೆ, 5 ಪೆನ್ನು ಗಳ ಬೆಲೆ ಎಷ್ಟು? ಸಾಮರ್ಥ್ಯ 2 1.1/4 ಇದರ ಅಂಶ ಮತ್ತು ಛೇದವನ್ನು ಗುರುತಿಸಿರಿ. 2.13/16 ಮತ್ತು 13/10 ಇವುಗಳ ನಡುವೆ ಸರಿಯಾದ ಚಿನ್ನೆ ಹಾಕು. 3.1/2 ಇದರ 5 ಸಮಾನ ಭಿನ್ನರಾಶಿ ಗಳನ್ನು ಬರೆ. 4. ನಾಲ್ಕನೇ ಐದು ಇದನ್ನು ಭಿನ್ನರಾಶಿಯಲ್ಲಿ ಬರೆ. ಸಾಮರ್ಥ್ಯ 3 1. ಕೋನಗಳ ವಿಧಗಳನ್ನು ಹೆಸರಿಸಿ. 2. A b c d e f g h i j k l m n o p q r p q r s t u v w x y z ಇವುಗಳಲ್ಲಿ ಕೋನ ಉಂಟುಮಾಡುವ ಅಕ್ಷರಗಳನ್ನು ಆರಿಸಿ ಬರೆಯಿರಿ. 3. 7 ಗಂಟೆ 45 ನಿಮಿಷ ಇಲ್ಲಿ ಉಂಟಾಗುವ ಕೋನವನ್ನು ಹೆಸರಿಸಿ . 4. 90 ಡಿಗ್ರಿ ಅಳತೆ ಕೋನವನ್ನು ರಚಿಸಿ. ಸಾಮರ್ಥ್ಯ 4. 1. ಆಯತದ ಸುತ್ತಳತೆ ಕಂಡುಹಿಡಿಯುವ ಸೂತ್ರ ಬರೆಯಿರಿ. 2. ಚೌಕದಲ್ಲಿ ಎಷ್ಟು ಸಮಾನ ಬಾಹು ಗಳಿರುತ್ತವೆ? 3. ನಿನ್ನ ಗಣಿತ ಅಭ್ಯಾಸ ಪುಸ್ತಕದ ಸುತ್ತಳತೆಯನ್ನು ಕಂಡುಹಿಡಿ. 4. ಎರಡು ಆಯಾಮಗಳನ್ನು ಹೊಂದಿರುವ ಆಕೃತಿಗಳನ್ನು ಏನೆಂದು ಕರೆಯುತ್ತಾರೆ?...
Comments
Post a Comment