*ಗಣಿತದ ರಸಪ್ರಶ್ನೆಗಳು*
1.5438 ಈ ಸಂಖ್ಯೆಯಲ್ಲಿ ನಾಲ್ಕರ ಸ್ಥಾನಬೆಲೆ ಏನು?
2. ಒಂದು ಅಂಕಿಯ ಅತಿ ಚಿಕ್ಕ ಸಂಖ್ಯೆ ಯಾವುದು?
3. ಒಂದು ಅಂ ಕಿಯ ಅತಿ ದೊಡ್ಡ ಸಂಖ್ಯೆ ಯಾವುದು?
4. 3 ಅಂಕಿಯ ಅತಿ ಚಿಕ್ಕ ಸಂಖ್ಯೆ ಯಾವುದು?
5. ಮೂರಂಕಿ ಅತಿ ದೊಡ್ಡ ಸಂಖ್ಯೆ ಯಾವುದು?
6. ಮೂವತ್ತು ಸಾವಿರದ ನಾಲ್ಕು ಇದನ್ನು ಸಂಖ್ಯೆಯಲ್ಲಿ ಹೇಳಿ.
7.89,999 ಇದನ್ನು ಪದಗಳಲ್ಲಿ ಹೇಳು.
8. 8470 ಇದರಲ್ಲಿ ಎಂಟರ ಮುಖಬೆಲೆ ಹೇಳು.
9.56,178 ಇದರಲ್ಲಿ ಆರರ ಸ್ಥಾನಬೆಲೆ ಹೇಳು.
10.1456 ಈ ಸಂಖ್ಯೆಯಲ್ಲಿ ನೂರರ ಸ್ಥಾನಕ್ಕೆ ಅಂದಾಜಿಸಿ ಹೇಳು.
11.8962 ಈ ಸಂಖ್ಯೆಯಲ್ಲಿ ಸಾವಿರದ ಸ್ಥಾನಕ್ಕೆ ಅಂದಾಜಿಸಿ ಹೇಳು.
12.8415 ಇದನ್ನು ವಿಸ್ತರಿಸಿ ಹೇಳು.
13.9124-3768 ಇದರ ವ್ಯತ್ಯಾಸ ತಿಳಿಸಿ.
14.40 ರ ಅಪವರ್ತನೆ ಗಳನ್ನು ಹೇಳು.
15.36/4 ಇದರಲ್ಲಿ ಭಾಜ್ಯ ಸಂಖ್ಯೆ ಯಾವುದು?
16.9 ರ ಮಗ್ಗಿ ಹೇಳು?.
17.3/4 ಈ ಭಿನ್ನರಾಶಿಯನ್ನು ಪದಗಳಲ್ಲಿ ಹೇಳು.
18. ಭಿನ್ನರಾಶಿ ಎಂದರೇನು?.
19. ಕೋನಗಳ ವಿಧಗಳು ಯಾವುವು?
20. ಭಿನ್ನ ರಾಶಿಯಲ್ಲಿರುವ ವಿಧಗಳು ಯಾವುವು?
21. ಗಂಟೆಯ ಮುಳ್ಳು, ನಿಮಿಷದ ಮುಳ್ಳು, ಸೆಕೆಂಡ್ ಮುಳ್ಳು ಹನ್ನೆರಡರ ಮೇಲಿದ್ದರೆ, ಯಾವ ಸಮಯವನ್ನು ಸೂಚಿಸುತ್ತದೆ?
22. ವೃತ್ತ ಎಂದರೇನು
23. ವೃತ್ತದಜ್ಯಾ ಎಂದರೇನು?
24. ವೃತ್ತದ ವ್ಯಾಸ ಎಂದರೇನು?
25. ಉದ್ದವನ್ನು ನಿಖರವಾಗಿ ಅಳೆಯಲು ಇರುವ ಆದರ್ಶ ಮಾನ ಯಾವುದು?
26. ಒಂದು ಮೀಟರ್ ನಲ್ಲಿ ಎಷ್ಟು ಸೆಂಟಿಮೀಟರ್ ಗಳು ಇರುತ್ತವೆ?
27. ಆಯತದ ಸುತ್ತಳತೆ ಕಂಡುಹಿಡಿಯುವ ಸೂತ್ರ ಹೇಳಿ?
28. ಚೌಕದಲ್ಲಿ ಎಷ್ಟು ಸಮನಾದ ಬಾಹು ಗಳಿವೆ?
29. ಉದ್ದ ಅಳೆಯಲು ಇರುವ ಅನೌಪಚಾರಿಕ ಮಾನಗಳು ಯಾವುವು?
30. ಒಂದು ಕಂಪಾಸ್ ಬಾಕ್ಸ್ ನ ಬೆಲೆ ರೂ.30 ಆದರೆ 4 ಕಂಪಾಸ್ ಬಾಕ್ಸ್ ನ ಬೆಲೆ ಎಷ್ಟು?
Comments
Post a Comment