ಏಳನೇ ತರಗತಿಯ ಸೇತುಬಂಧ
* ಪೂರ್ವ ಹಾಗೂ ಸಾಫಲ್ಯ ಪರೀಕ್ಷೆಯ ಪ್ರಶ್ನೆಗಳು*
ಸಾಮರ್ಥ್ಯ 1.
1. ಮೂರು ಲಕ್ಷದ ಎಪ್ಪತ್ತೈದು ಸಾವಿರದ ಮುನ್ನೂರ ಏಳು ಇದನ್ನು ಸಂಖ್ಯೆಯಲ್ಲಿ ಬರೆದು ಅಲ್ಪವಿರಾಮ ಗಳನ್ನು ಹಾಕಿ.
2. ಇಪ್ಪತ್ತಮೂರು ಲಕ್ಷದ ಮೂವತ್ತು ಸಾವಿರದ ಹತ್ತು ಇದನ್ನು ಸಂಖ್ಯೆಯಲ್ಲಿ ಬರೆದು ಅಲ್ಪವಿರಾಮ ಗಳನ್ನು ಹಾಕಿ.
3. 6,2,7,4,3 ಈ ಪ್ರತಿಯೊಂದು ಸಂಖ್ಯೆಯನ್ನು ಒಂದು ಬಾರಿ ಮಾತ್ರ ಬಳಸಿ ಬರೆಯಬಹುದಾದ ಅತಿದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಿರಿ.
4.3,8,1,2,5 ಈ ಪ್ರತಿಯೊಂದು ಸಂಖ್ಯೆಯನ್ನು ಒಂದು ಬಾರಿ ಮಾತ್ರ ಬಳಸಿ ಬರೆಯಬಹುದಾದ ಅತಿ ಚಿಕ್ಕ ಸಂಖ್ಯೆಯನ್ನು ಕಂಡುಹಿಡಿಯಿರಿ.
ಸಾಮರ್ಥ್ಯ 2.
1. ಅತ್ಯಂತ ಚಿಕ್ಕ ಪೂರ್ಣ ಸಂಖ್ಯೆ ಯಾವುದು?
2. 10000 ಈ ಸಂಖ್ಯೆಯ ಹಿಂದಿನ ಸಂಖ್ಯೆ ಯಾವುದು?
3. 5999 ಈ ಸಂಖ್ಯೆಯ ಮುಂದಿನ ಸಂಖ್ಯೆ ಯಾವುದು?
4. 10999 ನಂತರದ ಮೂರು ಸ್ವಾಭಾವಿಕ ಸಂಖ್ಯೆಗಳನ್ನು ಬರೆಯಿರಿ.
ಸಾಮರ್ಥ್ಯ 3.
1. 24 ಈ ಸಂಖ್ಯೆಯ ಎಲ್ಲಾ ಅಪವರ್ತನಗಳನ್ನು ಬರೆಯಿರಿ.
2. 1 ರ ಅಪವರ್ತನ ಗಳ ಸಂಖ್ಯೆ ಎಷ್ಟು?
3. ಅತ್ಯಂತ ಚಿಕ್ಕ ಸಮ ಸಂಖ್ಯೆ ಯಾವುದು?
4. 18, 48 ಈ ಸಂಖ್ಯೆಗಳ ಮ.ಸಾ.ಅ ಕಂಡುಹಿಡಿಯಿರಿ.
ಸಾಮರ್ಥ್ಯ 4.
1. ತೆರೆದ ವಕ್ರರೇಖೆ, ಆವೃತ ವಕ್ರರೇಖೆ ಗೆ ಕಚ್ಚಾ ಚಿತ್ರಗಳನ್ನು ಎಳೆಯಿರಿ.
2. ವೃತ್ತದಲ್ಲಿ ವ್ಯಾಸ ಎಂದರೇನು?
3. ಎರಡು ಬಿಂದುಗಳ ನಡುವಿನ ಕನಿಷ್ಠ ದೂರ ವನ್ನು ಏನೆಂದು ಕರೆಯುತ್ತೇವೆ?
4. ಒಂದು ಜೋಡಿ ಬಾಹುಗಳು ಸೇರುವ ಬಿಂದುವನ್ನು ಏನೆಂದು ಕರೆಯುತ್ತೇವೆ?
ಸಾಮರ್ಥ್ಯ 5.
1. ಭಿನ್ನರಾಶಿ ಎಂದರೇನು?
2.1/3 ಇದರ ಒಂದು ಸಮಾನ ಭಿನ್ನರಾಶಿಯನ್ನು ಬರೆಯಿರಿ.
3.7/10 ಅಥವಾ 8/10 ಇವುಗಳಲ್ಲಿ ದೊಡ್ಡ ಬಿನ್ನರಾಶಿ ಯಾವುದು?
4.8/15 +3/15 ಉತ್ತರ ಕಂಡುಹಿಡಿಯಿರಿ.
Comments
Post a Comment