*ಶಿಕ್ಷಕರಾದ ನಾವು ಮನೆಯಿಂದಲೇ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡ ಬಗ್ಗೆ ಅನಿಸಿಕೆಗಳು*

        ಶಿಕ್ಷಕರಾದ ನಾವು ಇಂದು ಮನೆಯಿಂದಲೇ ಕುಳಿತುಕೊಂಡು ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ವಿಷಯಗಳನ್ನು ಹುಡುಕುತ್ತಾ, ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಅವುಗಳಲ್ಲಿ ಕೆಲವು ವಿಷಯಗಳು ನಮ್ಮ ಸ್ಮರಣೆಯ ಆಳದಲ್ಲಿ ಭದ್ರವಾಗಿದ್ದು, ಆ ವಿಷಯಗಳು ನಮ್ಮ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಯಾವಾಗ ತಲುಪಿಸುತ್ತೇವೆ ಎಂಬ ಹಂಬಲ ಮನದಲ್ಲಿ ಆಳವಾಗಿ ಬೇರೂರಿದೆ. ನಾವು ಮನೆಯಿಂದಲೇ ಕುಳಿತು ನಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ನಲ್ಲಿ ಅನೇಕ ವಿಡಿಯೋಗಳನ್ನು ವೀಕ್ಷಣೆ ಮಾಡಿದೆವು. ಆಗ ಕೆಲವು ವಿಷಯಗಳು ಹೀಗೂ ನಾವು ಮಕ್ಕಳಿಗೆ ತಿಳಿಸಿ ಕೊಡಬಹುದು. ಮಕ್ಕಳು ಸುಲಭವಾದ ರೀತಿಯಲ್ಲಿ ವಿಷಯವನ್ನು ಗ್ರಹಿಸುವ ಸುಲಭೋ ಪರಿಗಳು ನಮಗೆ ಮನನ ವಾದವು. ಚಿತ್ರ ಪಾಠದ ಮೂಲಕ, ದೃಶ್ಯ ಪಾಠದ ಮೂಲಕವು ಗಣಿತವನ್ನು ಯಾವ ರೀತಿ ಸುಲಭವಾಗಿ ಕಲಿಸಿ ಕೊಡಬಹುದು ಎಂಬುದರ ಬಗ್ಗೆ ನಮಗೆ ಹಲವಾರು ಮಾರ್ಗಗಳು ಗೋಚರವಾದವು. ಅಲ್ಲದೆ ನಮ್ಮ ಸಹಪಾಠಿಗಳೊಂದಿಗೆ ನಿರಂತರವಾಗಿ ನಮ್ಮ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾ ಹೋದಂತೆಲ್ಲ, ಹಲವಾರು ತಿಳಿಯದ ವಿಷಯಗಳು ನಮಗೆ ತಿಳಿಯಲ್ಪಟ್ಟ ವು ಹಾಗೂ ಮನೆಯಿಂದಲೇ ಕುಳಿತು ಮೊಬೈಲ್ ಮೂಲಕ ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಕೆದಕು ವಂತಾಯಿತು. ಮೊಬೈಲ್ ಬಳಕೆ ಸರಿಯಾದ ರೀತಿಯಲ್ಲಿ ತಿಳಿಯದವರಿಗೂ, ಮೊಬೈಲನ್ನು ಯಾವ ರೀತಿಯಾಗಿ ಬಳಸಿ ವೃತ್ತಿಗೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ಪೂರ್ಣ ಜ್ಞಾನ ದೊರೆಯಿತು. ಮನೆಯಲ್ಲಿರುವ ಸಾಮಾನುಗಳಿಂದ ನಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಕಲಿಕೋಪಕರಣಗಳನ್ನು ಮಾಡಲು ಪ್ರೇರಣೆ ದೊರೆಯಿತು. ದೂರದರ್ಶನದ ಮೂಲಕ, ಮೊಬೈಲ್ ಮೂಲಕ ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿದುಕೊಂಡು, ಅದನ್ನು ನಮ್ಮ ಮುಂದಿನ ವೃತ್ತಿಜೀವನದಲ್ಲಿ ಯಾವ ರೀತಿಯಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ನೈಪುಣ್ಯತೆಯನ್ನು ಪಡೆದುಕೊಂಡಿದ್ದೇವೆ. ಅದು ಶಿಕ್ಷಕನಾದವನು ಸದಾ ವಿದ್ಯಾರ್ಥಿಯಾಗಿ ಸದಾ ಕಲಿಕೆಯಲ್ಲಿ ತೊಡಗಬೇಕಾದ ಅನಿವಾರ್ಯತೆ ಇಂದು ಒದಗಿದೆ. ಏಕೆಂದರೆ ನಾವು ತಿಳಿದುಕೊಂಡ ವಿಷಯಗಳು ಕೇವಲ ಸಾಸಿವೆ ಕಾಳಷ್ಟು ಇಲ್ಲ. ತಿಳಿದುಕೊಳ್ಳಬೇಕಾದದ್ದು ತುಂಬಾ ಇದೆ. ಆದ್ದರಿಂದ ಇಂದು ನಾವು ಮನೆಯಲ್ಲೇ ಕುಳಿತು ಹಲವಾರು ವಿಷಯಗಳನ್ನು ಸಂಗ್ರಹಿಸಿಕೊಳ್ಳಲು, ವೃತ್ತಿಗೆ ಸಂಬಂಧಿಸಿದಂತೆ ಆಳವಾದ ಜ್ಞಾನವನ್ನು ಹೊಂದಲು ಇಂದು ಅನೇಕ ಶಿಕ್ಷಣ ತಜ್ಞರ ಅನಿಸಿಕೆಗಳು, ಅವರ ಪಾಠ ಬೋಧನೆಗಳು ನಮ್ಮ ವೃತ್ತಿಯಲ್ಲಿ ನೈಪುಣ್ಯತೆಯನ್ನು ಸಾಧಿಸಲು ನಮಗೆ ತುಂಬಾ ಸಹಾಯಕಾರಿಯಾಗಿವೆ. ಇಂದು ನಾವು ನಮ್ಮ ವೃತ್ತಿಯಲ್ಲಿ ಸದಾ ನಿಷ್ಠರಾಗಿ, ನಮ್ಮಲ್ಲಿರುವ ಆ ಜ್ಞಾನವೆಂಬ ನೀರನ್ನು ನಿತ್ಯವೂ ಮಗುವೆಂಬ ಗಿಡಕ್ಕೆ ಎರೆಯುತ್ತಾ ಮಗುವೆಂಬ ಗಿಡವನ್ನು ದೊಡ್ಡ ಹೆಮ್ಮರವಾಗಿ ಮಾಡಿ ದೇಶವನ್ನು ಭದ್ರ ಬುನಾದಿಯತ್ತ ಕೊಂಡೊಯ್ಯುವ ಕೆಲಸವನ್ನು ನಾವೆಲ್ಲ ಶ್ರದ್ಧೆಯಿಂದ ಮಾಡೋಣ. ನಮ್ಮನ್ನು ಈ ಹಂತಕ್ಕೆ ತಂದ ನಮ್ಮ ಮಾತೃ ಪಿತೃಗಳನ್ನು ಹಾಗೂ ನಮಗೆ ಅಕ್ಷರ ಧಾರೆಯೆರೆದ ಶಿಕ್ಷಕರನ್ನು ಸದಾ ನಮ್ಮ ಮನದಾಳದಲ್ಲಿ ನೆನೆಯೋಣ ಎಂದು ಹೇಳುತ್ತಾ ಈ ವಿಷಯಕ್ಕೆ ವಿದಾಯ ಹೇಳುತ್ತೇನೆ.

Comments

Popular posts from this blog

ದಿನಾಂಕ 23 -7- 202೦

ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ

ಸೇತುಬಂಧ