ಯೂಟ್ಯೂಬ್ನಲ್ಲಿ ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಮತ್ತು ಶಿಕ್ಷಕರ ಸಿಸ್ತು ಎಂಬ ವಿಡಿಯೋದ ವೀಕ್ಷಣೆ
ಇಂದು ದಿನಾಂಕ 28-7-2020 ರಂದು ಯೂಟ್ಯೂಬ್ ನಲ್ಲಿ ಮಕ್ಕಳ ಶಿಕ್ಷಣದಲ್ಲಿ ಪಾಲಕರ ಪಾತ್ರ ಮತ್ತು ಶಿಕ್ಷಕರ ಶಿಸ್ತು ಕುರಿತಾದ ವಿಡಿಯೋವನ್ನು ವೀಕ್ಷಿಸಲಾಯಿತು. ವಾಸುದೇವ್ ಪಾಟೀಲ್ರವರು ಈ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮಕ್ಕಳ ಶಿಕ್ಷಣದಲ್ಲಿ ಇಂದು ಮೌಲ್ಯಾಧಾರಿತ ಕಲಿಕೆ ಎನ್ನುವುದು ಕಾಣದಾಗಿದೆ. ಇಂದು ಸಮಾಜದಲ್ಲಿ ನಾವು ಬಹುತೇಕ ಅಪರಾಧಗಳನ್ನು ದಿನನಿತ್ಯವೂ ಕಾಣುತ್ತಿರುತ್ತೇವೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಸರಿಯಾದ ರೀತಿಯಲ್ಲಿ ಕಾಳಜಿವಹಿಸಿ, ಐದು ವರ್ಷಗಳವರೆಗೆ ಮಕ್ಕಳಲ್ಲಿ ನಾವು ಸರಿಯಾದ ಆಲೋಚನೆಗಳನ್ನು ಬೆಳೆಸಿದ್ದೆ ಆದರೆ ಆ ಮಗು ಮುಂದೆ ಒಳ್ಳೆಯ ಮೌಲ್ಯವರ್ದಿತ ಶಿಕ್ಷಣವನ್ನು ಪಡೆಯುತ್ತಾನೆ. ಅಲ್ಲದೆ ಪಾಲಕರಾದವರು ಶಿಕ್ಷಕರ ಬಗ್ಗೆ ಒಳ್ಳೆಯ ಗೌರವವನ್ನು ಹೊಂದಿದ್ದರೆ ಆ ಮಗು ಶಿಕ್ಷಕರ ಬಗ್ಗೆ ಒಳ್ಳೆಯ ಗೌರವವನ್ನು ಒಂದೇ ಅವರ ಮಾತುಗಳಿಗೆ ಬದ್ಧನಾಗಿರುತ್ತಾನೆ. ಅಲ್ಲದೇ ಶಿಕ್ಷಕರಾದವರು ತಾವು ಒಳ್ಳೆಯ ರೀತಿಯಿಂದ ಶಿಸ್ತಿನಿಂದ ನಡೆದುಕೊಂಡಾಗ ಮಗು ಸಹ ಶಿಕ್ಷಕರನ್ನು ಅನುಕರಿಸಿ ಆ ಶಿಸ್ತನ್ನು ತನ್ನೊಳಗೆ ಅನುಷ್ಠಾನಗೊಳಿಸಿ ಕೊಳ್ಳುತ್ತದೆ.ಆದ್ದರಿಂದ ಶಿಕ್ಷಣದಲ್ಲಿ ಮೌಲ್ಯವನ್ನು ಅನುಷ್ಠಾನಗೊಳಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾಗಿದೆ.
Comments
Post a Comment