ಸ್ನೇಹಿತರು, ವೃತ್ತಿ ಬಾಂಧವರು, ಸಹದ್ಯೋಗಿಗಳೊಂದಿಗೆ ಮಾತನಾಡಿ ಜ್ಞಾನ ಹೆಚ್ಚಿಸಿಕೊಂಡ ಬಗ್ಗೆ ಟಿಪ್ಪಣಿ
ಇಂದು ಕೊರೋನಾ ಸಾರ್ವತ್ರಿಕವಾಗಿ ಹಬ್ಬಿರುವ ಹಿನ್ನೆಲೆ ಶಿಕ್ಷಕರಾದ ನಮ್ಮೆಲ್ಲರಿಗೂ ಮನೆಗೆಲಸವನ್ನು ನೀಡುವ ಮೂಲಕ ಯೋಜನೆಗಳನ್ನು ರೂಪಿಸಲು ತಿಳಿಸಲಾಗಿದೆ. ಈ ಯೋಜನೆಗಳ ಪ್ರಯುಕ್ತ ಅನೇಕ ಸ್ನೇಹಿತರ, ವೃತ್ತಿ ಬಾಂಧವರ ಜೊತೆ ಮಾತನಾಡಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲಾಯಿತು. ಬ್ಲಾಗನ್ನು ಆರಂಭ ಮಾಡುವ ಮೂಲಕ ಯೋಜನೆಗಳನ್ನು ಅಲ್ಲಿ ಯಾವ ರೀತಿಯಾಗಿ ಸೇರ್ಪಡೆ ಮಾಡಬೇಕು ಎನ್ನುವುದರ ಬಗ್ಗೆ ನನ್ನ ಸಹೋದ್ಯೋಗಿ ಯಾದ ಕುಮಾರಿ ವೆಂಕಟಮ್ಮ ಅವರೊಂದಿಗೆ ಚರ್ಚಿಸುವ ಮೂಲಕ ಅನೇಕ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮೊಬೈಲ್ ಬಳಕೆ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲಾಯಿತು. ಅಲ್ಲದೆ ಮನೆಯಲ್ಲಿರುವ ವಸ್ತುಗಳ ಮೂಲಕ ನಲಿಕಲಿ ಗಣಿತ ವಿಷಯಕ್ಕೆ ಸಂಬಂಧಪಟ್ಟಂತೆ ಕಲಿಕೋಪಕರಣಗಳು ತಯಾರಿಸುವ ಕುರಿತು ಚರ್ಚಿಸಲಾಯಿತು. ಸ್ನೇಹಿತರಾದ ಹಾಗೂ ನಮ್ಮ ಯಜಮಾನರಾದ ಶ್ರೀ ಪ್ರಕಾಶ್ ರವರೊಂದಿಗೆ ಚರ್ಚಿಸುವ ಮೂಲಕ ಬ್ಲಾಗ್ ತೆಗೆಯುವ ಕುರಿತು ಹಾಗೂ ಬ್ಲಾಗ್ನಲ್ಲಿ ಮಾಹಿತಿಯನ್ನು ಯಾವ ರೀತಿಯಾಗಿ ಅಳವಡಿಸಬೇಕು ಎಂಬುದರ ಕುರಿತು ಅನೇಕ ಹೆಚ್ಚಿನ ಮಾಹಿತಿಯನ್ನು ಪಡೆಯಲಾಯಿತು ಯೂಟ್ಯೂಬ್ನಲ್ಲಿ ಅನೇಕ ಸಹದ್ಯೋಗ...